Index   ವಚನ - 102    Search  
 
ಹೊರಗು ಒಳಗುಯೆಂಬ ಮರವೆಯ ಮನುಜರೆ ಕೇಳಿ ಹೊರಗು ಜನನ ಮರಣಕೆ ಹೆಣ್ಣು ಹೊನ್ನು ಮಣ್ಣು ತ್ರಿವಿಧಕ್ಕೆ ಹೊರಗು ಸ್ವರ್ಗ ಮರ್ತ್ಯ ಪಾತಾಳಕ್ಕೆ ಪರಾಪರ ವಸ್ತು ಹೊರಗಾದವರ ಹೊರಗೆಂಬುದೆ ಸದಾಚಾರ. ಒಳಗಾದವರ ಹೊರಗೆಂಬುದೆ ಅನಾಚಾರ. ಹೊರಗು ಒಳಗುಯೆಂಬ ಉಭಯದ ಭೇದವ ಮರವೆಯ ನರರೇನ ಬಲ್ಲರಯ್ಯ! ಶಿವಾಚಾರದ ಖೂನವ ಹೊರಗಾದಾತ ಶಿವಭಕ್ತ, ಭಕ್ತನೊಳಗಾದಾತ ಶಿವ. ಹೊರಗೆಂಬುದು ಒಳಗುಂಟು ಒಳಗೆಂಬುದು ಹೊರಗುಂಟು ಅರುಹು ಜ್ಞಾನದ ಉಭಯದ ಮಧ್ಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.