Index   ವಚನ - 106    Search  
 
ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನಯ್ಯ? ಸನ್ನಹಿತರಲ್ಲ. ಮಬ್ಬುಗಾವಳ ಗವಿದಂತೆ ಮೋರೆಗೆ ಮೋರೆ ತಾಕು ತಾಕು ಇಬ್ಬರ ವಿಶ್ವಾಸ ಇಕ್ಕುರೋಗವಾಯಿತ್ತು . ನಿಬ್ಬಣದ ಮನೆಯಲ್ಲಿ ನೀ ಕದ್ದೆ ತಾ ಕದ್ದೆಯೆಂದು ಕೊಂಡಾಡಿದಂತೆ, ಕಬ್ಬ ಕಡಿದು ಗಾಣವಂ ಆಡಿಸಿ ಕಾವಲಿಯೊಳು ಸುಟ್ಟರೆ ಸಿಹಿ ಬಿಟ್ಟೀತೆ? ಹುಬ್ಬ ಹಾಕುತ ಹಿರೆ ಒಡೆಯರಿಗಿದಿರಾಗಿ ಒಡೆಯರು ಕಬ್ಬು ಕಟ್ಟಿಗೆಗೆ ಆ ಗುಣವಿತ್ತು ಗುರುಶಿಷ್ಯರಿಗೆಯಿಲ್ಲ ತುಬ್ಬನಿಕ್ಕಿ ತೆಗೆದಾರು ಇಬ್ಬರ ಕಳಂಕವ ಇನ್ನೊಬ್ಬನೆ ಗುರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.