Index   ವಚನ - 108    Search  
 
ಭೂಮಿಯ ಹೋಲುವ ಭಕ್ತ ಜಲವ ಹೋಲುವ ಮಹೇಶ್ವರ ಅಗ್ನಿಯ ಹೋಲುವ ಪ್ರಸಾದಿ ವಾಯುವ ಹೋಲುವ ಪ್ರಾಣಲಿಂಗಿ ಆಕಾಶವ ಹೋಲುವ ಆದ್ಯಂತ ಶರಣ ಇಂತು ಈ ಪಂಚತತ್ವವ ಹೋಲುವ ಐಕ್ಯ. ಷಡುಮುಖ ಸಮಸ್ತಕ್ಕೆ ಭಕ್ತನೆ ಬುಡ ಶಿವನೇ ಬೀಜ, ವಿಶ್ವವೇ ಮುಖ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.