ಕತ್ತಲೆಯ ಕಾಳದೊಳು ಸುಳಿದಾಡುವಾ ಹಕ್ಕಿ
ಪಕ್ಷಿ ಭಾವವಿಲ್ಲದೆ ಇಲ್ಲದ ವ್ಯವಹಾರಗೊಂಡಿತ್ತು.
ಸುಳಿಗಾಳಿ ಬೀಸಿ ಸೂರ್ಯನುದಯಿಸಲು,
ಕತ್ತಲೆಯ ಕಾಳಕ್ಕೆ ಬಿಸಿಲು ನೆರೆಯಲು,
ನಟ್ಟನಡುಮಧ್ಯ ಸುತ್ತಲಿಕ್ಕುವ ಮಾರಿ ದೇವಿಯಾದಳು
ನಿರಂಜನ ಚನ್ನಬಸವಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Kattaleya kāḷadoḷu suḷidāḍuvā hakki
pakṣi bhāvavillade illada vyavahāragoṇḍittu.
Suḷigāḷi bīsi sūryanudayisalu,
kattaleya kāḷakke bisilu nereyalu,
naṭṭanaḍumadhya suttalikkuva māri dēviyādaḷu
niran̄jana cannabasavaliṅgavanarivudakke.