Index   ವಚನ - 6    Search  
 
ಕಟ್ಟಕಡೆಯಲಿಂದ ನಟ್ಟನಡುಮಧ್ಯಕ್ಕೆ ಬರಲು, ಸಟ್ಟಸರಿರಾತ್ರಿ ಕವಿಯಿತ್ತು ನೋಡಾ! ಹುಸಿಗಳ್ಳರೊತ್ತಿಬಂದಲ್ಲಿ ಹೆಸರು ಅಡಗಿ ಹೋಯಿತ್ತು. ಮತ್ತೆ ನೋಡ ಕಂಡ, ಮಿಥ್ಯದೃಷ್ಟರೊಡ ಕಂಡ, ನಿರಂಜನ ಚನ್ನಬಸವಲಿಂಗವ ನೋಡ ಕಂಡ.