Index   ವಚನ - 8    Search  
 
ಬಂದು ನಿಂದಲ್ಲಿ ಕಾರಿರುಳು ಕವಿದು ನಿದ್ರೆಗೈವ ಕಾಲದೊಳು ಚರಣಾಯುಧ ಕೂಗಲು ನಿದ್ರೆಗಳೆಯಲು ರವಿಯ ಮಧ್ಯೆ ಕತ್ತಲೆಗೆಡೆಯಿಲ್ಲ ನೋಡ. ಕೆಂಡಕ್ಕೆ ಬಂದೊರಲೆ ನಿಂದಿರಲೆಡೆಯಿಲ್ಲ! ಜ್ಞಾನೋದಯವಾದ ಶರಣನ ಮುಂದೆ ತಮ್ಮ ಶರಣವೃಂದ ಗಾಲುಮೇಲುಗಳ ನಾಶ ನಿರಂಜನ ಚನ್ನಬಸವಲಿಂಗಾ.