Index   ವಚನ - 24    Search  
 
ಏನೆಂಬೆನೆಂತೆಂಬೆನೆನ್ನ ಮನಕ್ಕೆ ನಾಚಿಕೆ ಬಾರದೇಕೆ? ಆಗಮನುಡಿಯ ಕೇಳುವುದು, ಇತರ ಸಾಗಿಸಿ ಹೇಳುವುದು, ಶಿವಾನುಭಾವವ ಕೇಳುವುದು, ಅದರಂತೆ ಬೋಧೆಯ ಹೇಳುವುದು. ನಿತ್ಯಾನಿತ್ಯವನಿದಿರಿಟ್ಟು ಸತ್ಯವೇ ಮೋಕ್ಷ, ಅಸತ್ಯವೇ ನರಕವೆಂಬುದು. ಶ್ರುತಿಗುರುಸ್ವಾನುಭಾವವನುಳಿದು, ಗಿಳಿಪಶುಭಾವ ಬರಲುಂಟೆ? ನಾಚಿಕೆ ತಾನೇಕೆ ಬಾರದು? ಇಂತಹ ಮನವ ಸಂತೈಸುವರನಾರನು ಕಾಣೆ ಶರಣರಲ್ಲದೆ ನಿರಂಜನ ಚನ್ನಬಸವಲಿಂಗ.