ಮನವೆಂಬ ಮಾಯೋಚ್ಫಿಷ್ಟವದು ಸಂಸಾರ ಕುಳಿಯೊಳು ಬಿದ್ದು
ಹೊರಳುವ ಇರುಳುಗಳ್ಳ ಮರುಳಮಾನವರಿಗೆತ್ತಣ ಮಾತಯ್ಯಾ.
ನಿಮ್ಮ ಮಹಾನುಭಾವರ ಸುಜ್ಞಾನಕ್ರಿಯೆಯೆತ್ತ, ಭವದ ಬೆಳೆಯೆತ್ತ?
ನಿರಂಜನ ಚನ್ನಬಸವಲಿಂಗಾ,
ನಿಮ್ಮ ನಿರವಯ ನಿಜಸಮಾಧಿಯೆತ್ತ,
ವೈತರಣಿ ದುರ್ಗತಿಗಳೆತ್ತ?
Art
Manuscript
Music
Courtesy:
Transliteration
Manavemba māyōcphiṣṭavadu sansāra kuḷiyoḷu biddu
horaḷuva iruḷugaḷḷa maruḷamānavarigettaṇa mātayyā.
Nim'ma mahānubhāvara sujñānakriyeyetta, bhavada beḷeyetta?
Niran̄jana cannabasavaliṅgā,
nim'ma niravaya nijasamādhiyetta,
vaitaraṇi durgatigaḷetta?