ಎಲೆ ಶಿವನೆ ನಿಮ್ಮನೊಲಿಸಿ ಕೂಡಬೇಕೆಂಬ
ಖಂಡಿತ ಜ್ಞಾನದ ಕರ್ಮಕಾಂಡಿಗಳನು
ಎಳತಟಗೊಳಿಸಿತ್ತು ಇದೇನು ನೋಡಾ!
ವ್ರತಿಗಳೆಂದು ಹೇಳಿಸಿಕೊಂಬ ಹಿರಿಯರ
ಬಲೆಯೊಳೊಂದಿಸಿ ಕಡೆಗೆ ಮಾಡಿಸಿಕೊಂಡಿತ್ತು.
ನಿಯಮಸ್ಥರೆನಿಸಿಕೊಂಬ ಹಿರಿಯರ
ಸೀಮಿಯ ಸಂಸಾರದೊಳಿಟ್ಟು ಬೇರೆ ಮಾಡಿಸಿಕೊಂಡಿತ್ತು.
ಶೀಲವಂತರೆನಿಸಿಕೊಂಬ ಹಿರಿಯರ
ದುಶ್ಶೀಲದೊಳೊಂದಿಸಿ ಬಿಡಿಸಿಕೊಂಡಿತ್ತು.
ಯತಿಗಳೆನಿಸಿಕೊಂಬ ಹಿರಿಯರ
ಸತಿಯರ ರತಿಸಂಸಾರದೋರಿ ಬಿಡಿಸಿಕೊಂಡಿತ್ತು.
ಗತಿಮತಿಗಳೆಂಬ ಹಿರಿಯರ
ಭಿನ್ನ ಭಿನ್ನ ಸಂಸಾರವೆರಸಿ ಕಾಡಿಕೊಂಡಿತ್ತು ನಿಮ್ಮ ಮಾಯೆ
ನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರನುಳಿದು.
Art
Manuscript
Music
Courtesy:
Transliteration
Ele śivane nim'manolisi kūḍabēkemba
khaṇḍita jñānada karmakāṇḍigaḷanu
eḷataṭagoḷisittu idēnu nōḍā!
Vratigaḷendu hēḷisikomba hiriyara
baleyoḷondisi kaḍege māḍisikoṇḍittu.
Niyamastharenisikomba hiriyara
sīmiya sansāradoḷiṭṭu bēre māḍisikoṇḍittu.
Śīlavantarenisikomba hiriyara
duśśīladoḷondisi biḍisikoṇḍittu.
Yatigaḷenisikomba hiriyara
satiyara ratisansāradōri biḍisikoṇḍittu.
Gatimatigaḷemba hiriyara
bhinna bhinna sansāraverasi kāḍikoṇḍittu nim'ma māye
niran̄jana cannabasavaliṅgā nim'ma śaraṇaranuḷidu.