Index   ವಚನ - 29    Search  
 
ನಿಮ್ಮಿಂದೆ ನೀವಿಟ್ಟ ಮಾಯೆ ನಿಮ್ಮಿಂದ ಬಂದು ಆವರಿಸಿ ನುಂಗುತಿರಲು ಇನ್ನಾರು ಬಿಡಿಸುವರಯ್ಯಾ? ಕಡಲುಕ್ಕಿ ಪ್ರಳಯವಾದರೆ, ಅಂಬರ ಕಳಚಿ ಧರೆಗೆ ಬಿದ್ದರೆ, ಭೂಜಲವೈದಿದರೆ ಇನ್ನಾರು ಹೇಳಿಕೇಳುವರಯ್ಯಾ? ನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ.