Index   ವಚನ - 32    Search  
 
ನಿನ್ನಾಣತಿಗೆ ಇಂಬುಗೊಂಡು ನಿನ್ನಿಂದಾದ ಸುಖವ, ನಿನ್ನಿಂದ ನಿನಗೀಯಬೇಕೆಂದು ಬಂದ ನಿಜಾತ್ಮನಿಗೆ, ನೀನಿಟ್ಟ ತೊಡರು ಬಂಧಿಸಲೇನು ಕಾರಣವಯ್ಯಾ? ನಿನ್ನ ಧರ್ಮದ ಗತಿಯ ನೀನಿಟ್ಟ ಮಾಯೆಯ ಕುಟಿಲವೋ? ನೀನೇ ಬಲ್ಲೆ ನಾನೆತ್ತ ಬಲ್ಲೆನಯ್ಯಾ! ನಿನ್ನೊಡಲ ಮೊರೆಗೊಂಡ ಮರುಳ ನಾನು ನಿರಂಜನ ಚನ್ನಬಸವಲಿಂಗಾ.