Index   ವಚನ - 33    Search  
 
ಹಡೆದ ಮಕ್ಕಳಕೂಡಿ ಹಾದರನಾಡುವ ಹಾವಾಡಗಿತ್ತಿ ಹಾವನಾಡಿಸುವಲ್ಲಿ, ನೋಡಬಂದ ನಾಡಜಾಣರ ನುಂಗಿ ಉಗುಳುತ್ತಿರ್ದಳು ನೋಡಾ! ಆ ಉಚ್ಫಿಷ್ಟದ ವಾಸನೆ ಮೂರು ಬಣ್ಣದೊಡೆಯರ ಸೋಂಕಿ ನಾನು ನೀನೆಂಬ ನಡೆ ನುಡಿಯವರ ಕೆಡಬಡಿದು ಎದೆಯನೊದೆಯುತ್ತಿದೆ ನೋಡಾ. ಆದಿಯ ನಾರಿಯ ಭಾವದಿಂದಲ್ಲದೆ ಸಾಧಿಸುವರ ಕಂಡು ಮರುಗುತಿರ್ದೆನು ಕಾಣಾ ನಿರಂಜನ ಚನ್ನಬಸವಲಿಂಗಾ.