ಚಂದ್ರ ಮೂಡಿದನಂತೆ,
ಚಂದ್ರಿಕೆಯೊಳು ನಿಂದು ನೋಡಿದನಂತೆ,
ಎಮ್ಮೊಡೆಯನ ಕುತ್ತಿಗೆಯ ಕೊಯ್ದನಂತೆ,
ಎಮ್ಮೊಡತಿಯ ಮೊಲೆ ಮೂಗ ಹರಿದು ಹಾಕಿದನಂತೆ,
ಗಾರುಡಿಗನಾಟವ ಕಲಿತುಕೊಂಡನಂತೆ,
ನಮ್ಮೆಲ್ಲರ ಕೊಂದು ಕೊಂಬುವನಂತೆ,
ನಿರಂಜನ ಚನ್ನಬಸವಲಿಂಗನಂತೆ,
ಬಲ್ಲಕಡೆಗೆ ಹೋಗುವ ಬನ್ನಿರತ್ತತ್ತ ಅರಿಯದಂತೆ.
Art
Manuscript
Music
Courtesy:
Transliteration
Candra mūḍidanante,
candrikeyoḷu nindu nōḍidanante,
em'moḍeyana kuttigeya koydanante,
em'moḍatiya mole mūga haridu hākidanante,
gāruḍiganāṭava kalitukoṇḍanante,
nam'mellara kondu kombuvanante,
niran̄jana cannabasavaliṅganante,
ballakaḍege hōguva bannirattatta ariyadante.