ಕಾಡಡವಿಯೊಳೋರ್ವನೆ ದೆಸೆಯಗಾಣದೆ
ಅಸುವಳಿವ ಕಾಲದಲ್ಲಿ,
ಒಸೆದೋರ್ವ ಬಂದು ಬಾ ಬಾ ಎಂದೆತ್ತಿ
ಪೊಳಲುಬಳಗದ ಮಧ್ಯ ನಿಲಿಸುವಂತೆ,
ಎನ್ನಾದಿಮಧ್ಯವಸಾನವಳಿದು,
ಭವಾರಣ್ಯ ಭೀತಿತ್ರಯದೊಳಿರ್ಪ ಆತ್ಮನನು
ಅಭಯದಿಂದೆತ್ತಿ, ಅರಿ ಸಕಲ ಪರಿಸಿ ತಲೆದಡಹಿ,
ಮೋಹದ ಮಾತಿನಿಂ ಕೈಯೊಳಗೆ ಕೈಯನಿತ್ತು ಕರುಣಿಸಿದ
ಒಳಹೊರಗೆ ಸಹಜದಲ್ಲಿ
ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನು.
Art
Manuscript
Music
Courtesy:
Transliteration
Kāḍaḍaviyoḷōrvane deseyagāṇade
asuvaḷiva kāladalli,
osedōrva bandu bā bā endetti
poḷalubaḷagada madhya nilisuvante,
ennādimadhyavasānavaḷidu,
bhavāraṇya bhītitrayadoḷirpa ātmananu
abhayadindetti, ari sakala parisi taledaḍahi,
mōhada mātiniṁ kaiyoḷage kaiyanittu karuṇisida
oḷahorage sahajadalli
niran̄jana cannabasavaliṅgavemba sadgurunāthanu.