•  
  •  
  •  
  •  
Index   ವಚನ - 1234    Search  
 
ತಾಪತ್ರಯದಲ್ಲಿ ಬೇವ ಒಡಲ ಹಿಡಿದು ತಂದು ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ, ಜ್ಞಾನವೆಂಬ ಕಾಯವ ಹಿಡಿದು ತಂದು ನಿಶ್ಶೂನ್ಯವೆಂಬ ತೇಜದಲ್ಲಿ ಸುಟ್ಟವನ, ನಿಶ್ಶೂನ್ಯವೆಂಬ ಶಬ್ದವ ಸುಟ್ಟು, ಭಸ್ಮವ ಧರಿಸಿದ ಲಿಂಗೈಕ್ಯನ, ಲೋಕದ ಸ್ಥಿತಿ-ಗತಿಯ ಮರೆದು, ನಿರ್ವಾಣದಲ್ಲಿ ನಿಂದವನ, ಗುಹೇಶ್ವರಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ ಕೋಪದಲ್ಲಿ ಕಿಚ್ಚಿನಲ್ಲಿ ಸುಟ್ಟಿಹೆನೆಂಬ ಸಿದ್ಧರಾಮಯ್ಯನನೇನೆಂಬೆನು?
Transliteration Tāpatrayadalli bēva oḍala hiḍidu tandu jñānavemba urige āhutiya koṭṭavana, jñānavemba kāyava hiḍidu tandu niśśūn'yavemba tējadalli suṭṭavana, niśśūn'yavemba śabdava suṭṭu, bhasmava dharisida liṅgaikyana, lōkada sthiti-gatiya maredu, nirvāṇadalli nindavana, guhēśvaraliṅgadalli tanna mareda allayyana kōpadalli kiccinalli suṭṭihenemba sid'dharāmayyananēnembenu?
Hindi Translation समस्याओं में पके पेठ पकड़ लाकर ज्ञान जैसी आग में बलिदेनेवाला, ज्ञान जैसे शरीर को पकड लाकर निश्यून्य जैसे तेज में जलानेवाला, निश्यून्य जैसे शब्द जलाकर, भस्म धारणकर लिंगैक्य को, लोक की स्थिति-गति भूलकर, निर्वाण में खड़ा हुआ, गुहेश्वर लिंग में अपने को भूल अल्लय्या की क्रोधाग्नि में जलाये कहें सिद्धरामय्या को क्या कहूँ? Translated by: Eswara Sharma M and Govindarao B N