Index   ವಚನ - 50    Search  
 
ಇರುಳಿನಿಂದೆದ್ದು ಬಂದು ಸತ್ತು, ಹುಟ್ಟಿ, ತಾಯಿ ಭಾವನ ಮಗನ ಹಡೆದಾಳು ನೋಡ! ಹಡೆದ ಮಗನ ಕೈಯಲ್ಲಿ ಹಿಡಿದು ಬೀದಿ ಬಾಜಾರ ಕೇರಿ ಕೇರಿಯಲ್ಲಿ ಮುದ್ದಾಡಲು, ಮಾತೆಯ ತರ್ಕೈಸಿ ಒಳಗೊಯ್ದು ನೆರೆದು ಹೆರೆಹಿಂಗದೆ ಮಾವ ಮುತ್ತೆಯರಿಗೊಂದಾಗಿ ಮಾಡಿ ಶರಣೆಂದರೆ ನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.