Index   ವಚನ - 53    Search  
 
ನಾದ ಬಿಂದು ಕಲಾ ನಿರಂಜನಲಿಂಗವೆನ್ನಂಗದಲ್ಲಿ ಸತ್ಕ್ರಿಯಾನುಭಾವ ಸುಖಿ. ಆದಿ ಮಧ್ಯಾಂತ ಶೂನ್ಯ ಅಗಮ್ಯ ಅಗೋಚರಲಿಂಗವೆನ್ನಂಗದಲ್ಲಿ ಸಮ್ಯಕ್‍ಜ್ಞಾನಾನುಭಾವ ಪರಿಣಾಮಿ. ಶೂನ್ಯ ನಿಃಶೂನ್ಯ ನಿಃಕಳಂಕ ನಿಜಾನಂದಲಿಂಗವೆನ್ನಂಗದಲ್ಲಿ ಸಮರಸಾನುಭಾವ ತೃಪ್ತಿ. ಸತ್ತುಚಿತ್ತಾನಂದ ಗುರುನಿರಂಜನ ಚನ್ನಬಸವಲಿಂಗ ಎನ್ನ ಸರ್ವಾಂಗ ಸಮಸುಖಾನಂದ.