Index   ವಚನ - 54    Search  
 
ನಿಜಲಿಂಗಮುಖದಿಂದ ಗಜಬಜೆಯನಳಿದು ಸುಜನಸಂದಣಿಯೊಳೊಪ್ಪಿ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡ ತೇಜೋಮೂರ್ತಿಯ, ನಿತ್ಯ ನಿರ್ಮಲಾನಂದ ಪ್ರಕಾಶದೊಳ್ವೆರೆದು ಸುಖಮಿರ್ದೆನು, ನಿರಂಜನ ಚನ್ನಬಸವಲಿಂಗಾ.