Index   ವಚನ - 62    Search  
 
ಅನಾದಿ ನಿರವಯಲಿಂಗದಲ್ಲಡಗಿರ್ದ ಅವಿರಳ ಪ್ರಕಾಶವೇ ಬಹಿರ್ಗತಿಯ ಬಂದು ನಿಂದಲ್ಲಿ ಚಿತ್ತೆಂದೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ, ಬಿದ್ಬಿಂದು, ಚಿತ್ಕಲೆಯೆಂಬ ತ್ರಯಾಕ್ಷರಗಳುದಯವಾದವು. ಆ ತ್ರಿವಿಧಪ್ರಣವವೇ ಚಿದ್ವಸ್ತು ಆ ಚಿದ್ವಸ್ತುವೆಂಬ ಚಿದ್ಭಸ್ಮವ ಧರಿಸಿದರೆ ಘನ ನಿರಂಜನ ಚನ್ನಬಸವಲಿಂಗವಾಗಿರ್ದೆನಯ್ಯಾ.