Index   ವಚನ - 67    Search  
 
ತ್ರಿಪುರವ ಸುಟ್ಟ ಭಸಿತವೆಂದು, ಕಾಲನನುರುಹಿದ ಭಸ್ಮವೆಂದು, ಕಾಮನ ದಹಿಸಿದ ವಿಭೂತಿಯೆಂದು ಪ್ರೇಮದಿಂದಿತ್ತೆನ್ನ ಗುರುಲಿಂಗ. ಅಂತಃಪ್ರಭಾನಂದಮಯ ವಿಭೂತಿಯನು ಪಾದದ್ವಿ, ಮಧ್ಯ, ದ್ವಯಬಾಹು, ಶಿರಮೂಲ, ತ್ರಿಪುಂಡ್ರ, ತ್ರಿವರ್ಣಂಗಳರಿದು ಧರಿಸಿ ಪರಮಪದದೊಳಾನಂದಮಯನಾಗಿರ್ದೆನು ಕಾಣಾ ನಿರಂಜನ ಚನ್ನಬಸವಲಿಂಗಾ.