ತಾಯಿ-ತಂದೆಯಿಲ್ಲದ ಕಂದಾ,
ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ!
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ!
ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ!
ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ.
Transliteration Tāyi-tandeyillada kandā,
ninage nīne huṭṭi beḷedeyallā!
Ninna pariṇāmave ninage prāṇatr̥ptiyāgirdeyallā!
Bhēdakarige abhēdyanāgi ninna nīne beḷaguttirdeyallā!
Ninna caritra ninage sahaja guhēśvarā.
Hindi Translation बिना माँ बाप का बेटा,
तुझे तू ही पैदा होकर पले
तेरा परिणाम ही तुझे प्राण तृप्ति हुई है न !
भेदकों को अभेद्य बने तुझे तू ही प्रकाश हो रहा है!
तेरा चरित्र तुझे सहज गुहेश्वरा।
Translated by: Eswara Sharma M and Govindarao B N