Index   ವಚನ - 83    Search  
 
ಸುಜ್ಞಾನಸ್ವರೂಪ ಶಿಷ್ಯನ ಮುಂದೆ ತೋರುವ ಪರಮಶಾಂತ ಪರಿಪೂರ್ಣಯ್ಯನಿಂದ, ಘನಮಹದೈಶ್ವರ್ಯ ಕರುಣಕಟಾಕ್ಷವೆಂಬ ಚಿದ್ರುದ್ರಾಕ್ಷಿಯು ಸಗುಣ ನಿರ್ಗುಣ ನಿಜ ಸಮರಸಾನಂದದೊಳಗೆಸಗೆಗೈದ ಬಳಿಕ, ಆನು ಅನ್ಯವಾದಾಭರಣಂಗಳನರಿಯದೆ ಅಪ್ರತಿಮಲಿಂಗಸನ್ನಿಹಿತನಾಗಿರ್ದು, ಕರದ್ವಂದ್ವ, ದ್ವಯತೋಳು, ಉರ, ಶಿಖೆಯು, ಮಸ್ತಕ, ಕರ್ಣದಲ್ಲಿ ಧರಿಸಿ ಗುರುನಿರಂಜನ ಚೆನ್ನಬಸವಲಿಂಗದಲ್ಲಿ ಪರಿಣಾಮದಲ್ಲಿ ಓಲಾಡುತಿರ್ದೆನು.