Index   ವಚನ - 90    Search  
 
ಕತ್ತಲೆಯ ಕಳೆದುಳಿಸಿಕೊಳಬಲ್ಲ ಪಂಚಾಕ್ಷರಿಯನುಳಿದು ಕುಟಿಲ ಮಂತ್ರ ಯಂತ್ರಗಳ ಕಲಿತು, ಗ್ರಾಸಕ್ಕೆ ತಿರುಗಿ ಹಿರಿಯರೆನಿಸಿ ಪರಿಭವವ ಕಾಣುವ ನರಕಿಗಳನೆಂತು ಗುರುಕರಜಾತರೆನ್ನಬಹುದು? ಎಂತು ಲಿಂಗಸುಖಿಗಳೆನ್ನಬಹುದು?