Index   ವಚನ - 92    Search  
 
ಪಂಚಾಕ್ಷರಸಂಬಂಧವಾದ ನಿಜಾನಂದ ಶರಣ ಗಜಬಜೆಯ ಗೋಷ್ಠಿಗಳನೊಮ್ಮೆ ತೋರ. ಅದೇನು ಕಾರಣವೆಂದೊಡೆ : ಆತನ ಜಿಹ್ವೆ ಪಂಚಾಕ್ಷರವ ನೆನೆದು ಪಂಚಲಿಂಗಸಂಬಂಧವಾದ ಕಾರಣ ಸಕಲ ತತ್ವಾತತ್ವಂಗಳೆಲ್ಲ ಲಿಂಗಮಯವಾಗಿ ಕಾಣುತಿರ್ದುದು ; ಇತರ ನುಡಿಯನರಿಯದಿರ್ದ ನಿರಂಜನ ಚನ್ನಬಸವಲಿಂಗದಲ್ಲಿ.