ವಚನ - 1239     
 
ತಾ ಹೆಳವ, ಎಡಹೊತ್ತಿನ ಪಯಣ, ಒಡ್ಡಿದ ಮಳೆಯ ಮುಗಿಲು, ಸೋರುವ ಮನೆ, ನೆಲದ ಹಾಸಿಕೆ, ಕೊರಳಲ್ಲಿ ಮೂರು ಮಣ್ಣ ಮಣಿ, ಹಿಂದೆ ಕಲ್ಲೊರಳು, ಮೇಣದೊನಕೆ, ಹಳೆ ಅಕ್ಕಿ, ಹೊಸ ಭಾಂಡ, ಹಸಿಯ ಬೆರಣಿಯ ತಾಳಿಯನಿಕ್ಕಿ, ಕಿಚ್ಚಿಲ್ಲದೆ ಒಲೆಯನುರುಹಿ ಓಗರವನಡಲು, ಗುಹೇಶ್ವರಲಿಂಗವು ಒಡೆದ ತಳಿಗೆಯಲಿ ಆರೋಗಣೆಯ ಮಾಡಿದನು.