ಜವನ ಕದ್ದ ಕಳ್ಳನು ಅಗಲಿ ಮಿಕ್ಕು ಹೋದಡೆ,
ಅಗಲಕ್ಕೆ ಹಬ್ಬಿತ್ತು ಅಲ್ಲಲ್ಲಿ ನೋಡಲು.
ಶರಣರ ಸಂಗವನರಸುವರೆಸಲ್ಲಾ? ಅಲ್ಲಲ್ಲಿ ನೋಡಿರೆ!
ಸಾಧಕರೆಲ್ಲರೂ ಸಾಧಿಸ ಹೋಗಿ,
ಅಭೇದ್ಯವನರಿಯದೆ ಕೆಟ್ಟರು ಗುಹೇಶ್ವರಾ.
Transliteration Javana kadda kaḷḷanu agali mikku hōdaḍe,
agalakke habbittu allalli nōḍalu.
Śaraṇara saṅgavanarasuvaresallā? Allalli nōḍire!
Sādhakarellarū sādhisa hōgi,
abhēdyavanariyade keṭṭaru guhēśvarā.
Hindi Translation मृत्यु से अतीत चोर दूर होकर
विशाल रूप में फैल गया, वहाँ तहाँ देखे तो।
शरण संघ चाहनेवाले वहाँ तहाँ देखे।
सब साधक साधने जाकर
अभेद्य को नजाने बिगड गये।
Translated by: Eswara Sharma M and Govindarao B N
Tamil Translation யமனின் கைக்கு எட்டாது அப்பாற்பட்டு எஞ்சியவன்,
ஆங்காங்கு காண்பதற்கு எங்கெங்கும் தென்படுவர்,
அடியார்தம் தொடர்பை விரும்பி ஆங்காங்கு தேடுவீர்,
சாதகர் அனைவரும் சாதிக்கச் சென்று
மெய்ப்பொருளை அறியாமலே கெட்டனர் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗಲಿಹೋಗು = ಅತೀತನಾಗಿ ಇರು; ಕಳ್ಳ = ದೇವ, ಯಾರಿಗೂ ಕಾಣದವ; ಜವನ ಕದ್ದವ = ಅಮೃತನಾದವ, ಜವನನ ಕೈಗೆ ಸಿಗದೆ ಹೋದವ; ಮಿಕ್ಕುಹೋಗು = ಉಳಿದುಹೋಗು;
Written by: Sri Siddeswara Swamiji, Vijayapura