ತನುಸೂತ್ರಚೈತನ್ಯಕ್ಕಿದ್ದನೊಬ್ಬ,
ಮನಸೂತ್ರಚೈತನ್ಯಕ್ಕಿದ್ದನೊಬ್ಬ,
ಆತ್ಮಸೂತ್ರಚೈತನ್ಯಕ್ಕಿದ್ದನೊಬ್ಬ,
ಈ ಮೂವರ ಮುಂಭಾರವ ಹೊತ್ತು ನಡೆಯದೆ,
ಮರೆದು ಬಳಸಿದರ್ಥದ ಬಡ್ಡಿಯನರಿದು ಕೊಟ್ಟು
ಮೂಲದ್ರವ್ಯದಲ್ಲಡಗಿ ಅಮರಿಸಬಲ್ಲರೆ
ಆದಿಯ ಭಕ್ತನಹುದು ಗುರುನಿರಂಜನ
ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Tanusūtracaitan'yakkiddanobba,
manasūtracaitan'yakkiddanobba,
ātmasūtracaitan'yakkiddanobba,
ī mūvara mumbhārava hottu naḍeyade,
maredu baḷasidarthada baḍḍiyanaridu koṭṭu
mūladravyadallaḍagi amarisaballare
ādiya bhaktanahudu guruniran̄jana
cannabasavaliṅgadalli.