Index   ವಚನ - 118    Search  
 
ಅಚ್ಚಭಕ್ತನ ಭಾವಕ್ಕೆ ಗುರುಲಿಂಗಜಂಗಮವು ಬಂದ ಬರವು- ವೃದ್ಧಂಗೆ ಯೌವ್ವನ, ಮೂರ್ಖಂಗೆ ವಿದ್ಯೆ, ಸುಖಿಗೆ ಆಯುಷ್ಯ, ಯಾಚಕಂಗರ್ಥ, ಮರಣವನೈದುವಂಗೆ ಮರುಜೀವಣಿ ಬಂದಂತೆ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಭಿನ್ನವಾದ ಕಾರಣ.