Index   ವಚನ - 119    Search  
 
ಮಣ್ಣಿನೊಳುನಿಂದು ಮಣ್ಣ ಹಿಡಿದುಮಾಡುವಲ್ಲಿ ಅನ್ಯವಿಲ್ಲದೆ ಸನ್ನಿಹಿತ ಭಕ್ತ. ಹೊನ್ನಿನೊಳು ನಿಂದು ಹೊನ್ನ ಹಿಡಿದು ಮಾಡುವಲ್ಲಿ [ಅನ್ಯವಿಲ್ಲದೆ ಸನ್ನಿಹಿತ ಭಕ್ತ. ಹೆಣ್ಣನೊಳು ನಿಂದು ಹೆಣ್ಣ ಹಿಡಿದು ಮಾಡುವಲ್ಲಿ] ತನ್ನನಿಲ್ಲದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಭಕ್ತ.