Index   ವಚನ - 128    Search  
 
ಕಾಮ ಉಲಿವುದು ಭಕ್ತಂಗೆ ಗುರುಲಿಂಗಜಂಗಮದ ಬರವಿಂಗೆ. ಕ್ರೋಧ ಉಲಿವುದು ಭಕ್ತಂಗೆ ಮದಬದ್ಧ ಮಾನವರ ಮೇಲೆ. ಲೋಭ ಉಲಿವುದು ಭಕ್ತಂಗೆ ಪಾದೋದಕ ಪ್ರಸಾದದ ನಿಲುವಿಂಗೆ. ಮೋಹ ಉಲಿವುದು ಭಕ್ತಂಗೆ ಶಿವಾನುಭಾವಸನ್ನಿಹಿತರ ಸಂಭಾಷಣೆಗೆ. ಮದ ಉಲಿವುದು ಭಕ್ತಂಗೆ ಶಿವದೂಷಕ ಜನರಿಂಗೆ. ಮತ್ಸರ ಉಲಿವುದು ಭಕ್ತಂಗೆ ಶರಣಸಂಸಾರ ಸಖತನಕೆ. ಇಂತು ಷಡುವರ್ಗಸಂಪನ್ನನಾದರೆ ಭಕ್ತನ ನಿಷ್ಠನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.