Index   ವಚನ - 129    Search  
 
ನಿತ್ಯಾನಂದ ಸುಖಮುಖ ಶರಣರು ನುಡಿವರು- ಕಾಯಕಳೆ ಸಂಗಮನೆಂದರೆ ಗುರುವಿಹೀನನೆಂದು. ಮನಕಳೆ ಸಂಗಮನೆಂದರೆ ಲಿಂಗವಿಹೀನನೆಂದು. ಪ್ರಾಣಕಳೆ ಸಂಗಮನೆಂದರೆ ಜಂಗಮವಿಹೀನನೆಂದು. ಭಾವಕಳೆ ಸಂಗಮನೆಂದರೆ ಪ್ರಸಾದವಿಹೀನನೆಂದು, ಅರುಹಿನ ಕಳೆ ಸಂಗಮನೆಂದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಾದೋದಕ ಸಂಬಂಧಿ ಭಕ್ತನೆಂದು.