Index   ವಚನ - 133    Search  
 
ಬಾಗಿ ಬಳುಕಿ ಬೀಗಿ ಬಿರಿದು ತೂಗಿಕೊಂಡು ಬಂದ ಭೋಗಿ ಸಾಕ್ಷಿಯಾಗಿ ತ್ಯಾಗ ಭೋಗ ಯೋಗವೆಂಬ ಮಹದೈಶ್ವರ್ಯದೊಳಗಿರ್ದೆನಯ್ಯಾ. ಬಂದು ಕೊಳ್ಳಿರಿ ಬಗೆಬಗೆಯಿಂದೆ, ಚಂದವಾದರೆ ನಿಂದುದು ನಿಷ್ಠೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಆನು ಭಕ್ತನೆಂಬೆ.