Index   ವಚನ - 132    Search  
 
ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ ಬೆನ್ನ ಹತ್ತಿ ಬಂದ ಎನ್ನಯ್ಯ ಸಾಕ್ಷಿಯಾಗಿ. ಎಲ್ಲವೂ ನಿಮ್ಮದೆಂಬೆಯೆಂದಲ್ಲಿ ವಂಚನೆಯುಳ್ಳರೆ ಬಂಧನ ಬಪ್ಪುದು ತಪ್ಪದು. ಅಂದಂದಿನ ಮಾತು ಇಂದುಳಿವನಲ್ಲ, ಸಂದುಸಂಶಯ ನಿಂದುರುಹಿದ ನಿಷ್ಠೆಯೆನಗುಂಟು ಗುರುನಿರಂಜನ ಚನ್ನಬಸವಲಿಂಗದಲ್ಲಿ.