Index   ವಚನ - 148    Search  
 
ಹಿಂದೆ ಮುಂದೆ ನಷ್ಟವಾಗದೆ ನಿಂದುಂಬ ನಿಃಕಾರಣ ಮಿಥ್ಯ ಬದ್ಧರಿಗೆ ನಿಜಕಾರಣದ ಗತಿಮತಿಗಳತಿಶಯ ಬರಲರಿಯದು ಅವರಂತಿರಲಿ, ಅನಿತ್ಯವ ನಿತ್ಯ ಮಾಡಿ ಕೊಟ್ಟು ಕೊಂಬ ಭೃತ್ಯಭಾವಿಯಾದ ಸತ್ಯಸಾವಧಾನಿಗಲ್ಲದೆ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ವಿನಯಪ್ರಸಾದಿ ಸಾಮಾನ್ಯವೆ?