Index   ವಚನ - 154    Search  
 
ಅಯ್ಯಾ, ಎನ್ನ ಭಕ್ತಿಯ ಬೆಳಗಿನೊಳಗೆ ಮತ್ತೊಂದು ಬೆಳಗುಬಂದು ಆವರಿಸಿತ್ತು ಇದೇನು ನೋಡಾ! ಅಯ್ಯಾ, ಎನ್ನ ಜ್ಞಾನದ ಬೆಳಗಿನೊಳಗೆ ಮತ್ತೊಂದು ಬೆಳಗು ಬಂದು ಆವರಿಸಿತ್ತು ಇದೇನು ನೋಡಾ! ಅಯ್ಯಾ, ಎನ್ನ ವೈರಾಗ್ಯದ ಬೆಳಗಿನೊಳಗೆ ಮತ್ತೊಂದು ಬೆಳಗು ಬಂದು ಆವರಿಸಿತ್ತು ಇದೇನು ನೋಡಾ! ಅಯ್ಯಾ, ಎನ್ನನಾವರಿಸಿದ ತ್ರಿವಿಧ ಬೆಳಗನೊಂದು ಮಾಡಿ ಮೂಲ ಬೆಳಗನರಿಯದಿರ್ದಲ್ಲಿ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನುಭಾವಬೆಳಗೆನ್ನ ಭಕ್ತಿಯ ಬೆರೆಸಿತ್ತು.