Index   ವಚನ - 155    Search  
 
ಭಿನ್ನಯೋಗಮಾರ್ಗಿಗಳಂತೆ ಹೃದಯ, ಭ್ರೂಮಧ್ಯ ಬ್ರಹ್ಮರಂಧ್ರದಲ್ಲಿ ವಸ್ತುವ ಕಂಡು ಕೂಡಬೇಕೆಂಬ ವಾಗದ್ವೈತಿಯಲ್ಲ ನೋಡಾ. ಅದೆಂತೆಂದೊಡೆ: ಪರಮಗುರುವಿನ ಕ್ರಿಯಾದೀಕ್ಷೆಯಿಂದೆ ಹೃದಯಕಮಲದಲ್ಲಿ ನಿಃಕಲಗುರುವ ಕಂಡು ನಾನು ಗುರುಭಕ್ತಿಯ ಮಾಡುತಿರ್ದೆನಯ್ಯಾ. ಪರಮಗುರುವಿನ ಮಂತ್ರದೀಕ್ಷೆಯಿಂದೆ ಭ್ರೂಮಧ್ಯದಲ್ಲಿ ನಿಃಶೂನ್ಯಲಿಂಗವ ಕಂಡು ನಾನು ಲಿಂಗಭಕ್ತಿಯ ಮಾಡುತಿರ್ದೆನಯ್ಯಾ. ಪರಮಗುರುವಿನ ವೇಧಾದೀಕ್ಷೆಯಿಂದ ಬ್ರಹ್ಮರಂಧ್ರದಲ್ಲಿ ನಿರಂಜನಜಂಗಮವ ಕಂಡು ನಾನು ಜಂಗಮಭಕ್ತಿಯ ಮಾಡುತಿರ್ದೆನಯ್ಯಾ. ಇಂತು ಸತ್ಕ್ರಿಯಾಸುಜ್ಞಾನವನುಳಿದು ನಡೆವ ಗತಿಯೆನಗಿಲ್ಲವಯ್ಯಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.