Index   ವಚನ - 165    Search  
 
ಕರಿಯ ಕಾಳಿನೊಳಗೆ ಕತ್ತಲ ಬೆಳಗಿನೊಳು ನರಳುತ್ತ ನೇಯುತಿದ್ದನೊಬ್ಬ ಜಾಡ. ಕುಳಿಯೊಳಗಣ ಬೆಂಕಿಯುಳಿದು ಮಗ್ಗದ ನೂಲು ಸುಟ್ಟು ಚಿಂತೆ ಮಾಡುತ್ತಿರಲು, ಮೇಲುಮನೆಯಿಂದೊಬ್ಬ ನೋಡಿ ಕೈಗೊಟ್ಟು ಕಾಲೆರಡು ಸಂದಿನೊಳಗೆ ಇಕ್ಕಿದಮೇಲೆ ತಿರುಗಿ ಜೀವಿಸಲುಂಟೆ? ಗುರುನಿರಂಜನ ಚನ್ನಬಸವಲಿಂಗಕ್ಕೆ ಇರ್ದುದ ಕೊಟ್ಟು ಸದ್ದಿಲ್ಲದಿರ್ದಡೆ ಸದ್ಭಕ್ತನೆಂಬೆ.