ವಂಚನೆವಿರಹಿತ ಕಾಯ ಉಪಚಾರಕ್ಕತಿ ಸೌಖ್ಯವಯ್ಯಾ.
ಚಂಚಲವಿಲ್ಲದ ಮನ ಅನುಕೂಲಗತಿ ರಮ್ಯವಯ್ಯಾ.
ಭಿನ್ನಭ್ರಾಮಕವಳಿದ ಭಾವ ಸ್ನೇಹಸೌಖ್ಯಾನಂದವಯ್ಯಾ.
ಈ ತ್ರಿವಿಧವಳಿದುಳಿದು ನಿಂದ ನಿಯತನಯ್ಯಾ ನಾನು
ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಭಿನ್ನಭಾವಿ ನಾನು, ಬಾರಯ್ಯಾ ತಂದೆ.
Art
Manuscript
Music
Courtesy:
Transliteration
Van̄canevirahita kāya upacārakkati saukhyavayyā.
Can̄calavillada mana anukūlagati ramyavayyā.
Bhinnabhrāmakavaḷida bhāva snēhasaukhyānandavayyā.
Ī trividhavaḷiduḷidu ninda niyatanayyā nānu
guruniran̄jana cannabasavaliṅgakke
abhinnabhāvi nānu, bārayyā tande.