Index   ವಚನ - 186    Search  
 
ಬಾರಯ್ಯಾ ಬಾರಯ್ಯಾ ಬಂದೊಮ್ಮೆ ನೋಡಯ್ಯಾ ಎನ್ನ ತನುಭಕ್ತಿ ಕೊರತೆಯನು. ಬಾರಯ್ಯಾ ಬಾರಯ್ಯಾ, ನಿಂದು ನಿಂದೊಮ್ಮೆ ನೋಡಯ್ಯಾ. ಬಾರಯ್ಯ ಬಾರಯ್ಯ, ಬಂದು ನಿಂದು ಸಂದೊಮ್ಮೆ ನೋಡಯ್ಯಾ, ಎನ್ನ ಭಾವಭಕ್ತಿ ಕೊರತೆಯನು. ಗುರುನಿರಂಜನ ಚನ್ನಬಸವಲಿಂಗಯ್ಯಾ ನಿನ್ನಂಗದಲ್ಲಿ ಎನ್ನ ನೋಡಯ್ಯಾ.