Index   ವಚನ - 188    Search  
 
ಅನಾದಿ ಪರಶಿವನು ಭೂಮಿಯ ನಿರ್ವಯಲಲ್ಲಿ ನೆಲೆಸಿದ ಮೇಲೆ, ಬೆಳೆದಳಿವ ಭೂರುಹಕ್ಕೆ ಆಸ್ಪದ ಹರಿಯಣಲೊಳಗಡಗಿತ್ತು. ಆ ಪಾವಕಪ್ರಭೆ ಸಕಲವನೊಳಕೊಂಡು ಅನಿಲವೆರೆದು ಅಂಬರಂಗಳನಾವರಿಸಲು ನೆಲ್ಲು ಪಲ್ಲವಿಸಿತ್ತು, ಅಲ್ಲಮಲ್ಲರು ವಿದ್ಯೆಯ ಬೀರುತ್ತ ಶಬ್ದವಿಟ್ಟರೆ ಬದ್ಧಮಂದಿರ ಶುದ್ಧಸುವ್ಯವಧಾನದಿಂದೆತ್ತೀಯಲು, ಎತ್ತಿಕೊಂಡರು ಭಕ್ತಸಹಿತ ಗುರುನಿರಂಜನ ಚನ್ನಬಸವಲಿಂಗ.