Index   ವಚನ - 189    Search  
 
ಹಲವು ಕಾಷ್ಠವನೊಟ್ಟಿ ಕಿಚ್ಚನಿಕ್ಕಿದರೆ ಅದರುರಿ ಆಕಾಶಕ್ಕೆ ನೆಗೆವುದಲ್ಲದೆ ಅಧೋಕಡೆಗಾಗದು ನೋಡಾ! ಹಲವು ಬಿತ್ತುಗಳು ಅಸ್ತಬೆಸ್ತ ಅಡಿ ಮಗ್ಗುಲಮುಖವಿರಲು ಬೆಳೆಯಾಕಾಶದತ್ತ ಮುಖವಲ್ಲದೆ ಅಧೋಕಡೆಗಾಗದು ನೋಡಾ! ತನುವಿಡಿದ ಭಕ್ತನಲ್ಲುದಯಿಸಿದ ಸುಜ್ಞಾನಾಗ್ನಿ ಸಕಲವ ದಹಿಸಿ ಪ್ರಕಾಶ ಶಿವನತ್ತ ನೆಗೆದುದು. ಅನಾದಿಭಕ್ತನಂಗದಲ್ಲಿ ಗುರುಕೃಪೆ ಹೇಗೆ ಬಿತ್ತಿದಡೇನು ಶಿವಜ್ಞಾನ ಬೀಜಾದಿಗಳು ಪಲ್ಲವಿಸಿ ಗುರುನಿರಂಜನ ಚನ್ನಬಸವಲಿಂಗಕ್ಕೆ ಸಸಿನ.