Index   ವಚನ - 213    Search  
 
ಮೂವರು ಮುಟ್ಟದ ದೇವ ದೇವರದೇವನ ಭಾವದಿಂ ತೆಗೆದುಕೊಟ್ಟ ಗುರುವಿನ ಮಗನೆಂದು ನುಡಿದು ನಡೆವಲ್ಲಿ ಇದನಳಿದು ಅಧೋದ್ವಾರದಿಂದೆ ಬಂದೆನೆಂಬ ಭಾವ ದಿಟವಾಗಿ, ಮಾಯೋಚ್ಫಿಷ್ಟ ಮದಮೋಹಿತನಾಗಿ ತಂದೆ ತಾಯಿ ಬಂಧು ಬಳಗ ನನ್ನದೆಂದು ನುಡಿದು, ಹಂದಿ ನಾಯಿಯ ಜನ್ಮಕ್ಕೆ ಬಂದು ಬಿದ್ದು ಹೋಗುವ ಮಂದಮತಿ ಮಾದಿಗರನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.