Index   ವಚನ - 219    Search  
 
ಸ್ವತಂತ್ರತ್ವಾನುಭಾವವೇ ಅಂಗವಾದ ಮಹೇಶ್ವರನು ಮಂತ್ರಾತ್ಮಕಸ್ವರೂಪವಾದ ಗುರುಲಿಂಗಸನ್ನಿಹಿತವಾಗಿ, ಆಚಾರ ಗೌರವ ಲಿಂಗ ಜಂಗಮ ಪ್ರಸಾದ ಮಹದ ನಿಷ್ಠೆಯೆಂಬಾರರೊಳುನಿಂದು, ಕ್ರಿಯಾ ಜ್ಞಾನ ಚರ್ಯಾಪದತ್ರಯದಿಂದಾಚರಿಸಲರಿಯದೆ ತನ್ನ ದುರ್ಗುಣಂಗಳ ಮಡುಗಿ ಇತರ ಗುಣವನರಸಿ ಎತ್ತಿತೋರುವ ಬಿನುಗು ಮೂಕೊರೆಯರನೆಂತು ಮಹೇಶ್ವರರೆನಬಹುದು? ಕೀಳುಶಾಸ್ತ್ರವನೋದಿ ಹಾಳುಗೋಷ್ಠಿಯ ಕಲಿತು, ಬಾಳಬಲ್ಲೆವೆಂದು ಕೂಳಿನಾಸೆಗೆ ದೇವಭಕ್ತರುಗಳ ಹಳಿವುತ್ತ ತೋಳ ಕುರಿಯ ಕೂಸು ನೆಗೆದಂತೆ ಬಾಳುವರ ತಪ್ಪಿನೊಳಿಕ್ಕಿ ಅರ್ಥವ ಸೆಳೆದುನುಂಗುವ ಹೇಯಸಂಬಂಧಿಗಳನೆಂತು ಮಹೇಶ್ವರರೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ?