Index   ವಚನ - 228    Search  
 
ಅನುಪಮಲಿಂಗದಲ್ಲಿ ಘನವಿನಯ ಮಂಗಲಮಹೇಶ್ವರನು ಒಂದನುವಿಡಿದಾಚಾರಸನ್ನಿಹಿತ ತಾನಾಗಿ, ತನುಮನಭಾವಾತ್ಮ ನಿರ್ಮಲ ಸ್ವಯಂಜ್ಯೋತಿ ನೋಡಾ! ಒಂದಿಷ್ಟು ಅನುಮಾನ ಟಕ್ಕು ಅನುಸರಣೆಗಳನರಿಯ ನೋಡಾ! ಎರಡು ಚರಿತೆಯ ಹಿಡಿದು ಕಳೆವರ ಹಳಿದು ತಿಳುಹುವ ನೋಡಾ! ಬಳಿವಿಡಿದು ಬೆಳೆಯುವರ ತಿಳಿಯಕೂಡಿ ಬೆಳಗುವ ನೋಡಾ! ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತದಿರುವಿನ ಪರಿ ನೋಡಾ.