Index   ವಚನ - 227    Search  
 
ಆದಿಯ ಲಿಂಗವ ಸಾಧಿಸಿಕೊಂಡ ಅಚ್ಚಮಹೇಶ್ವರನು ಅಲ್ಲದಾಟವನಾಡುವನಲ್ಲ. ಬಲ್ಲಿದ ಕ್ರಿಯಾಜ್ಞಾನಭರಿತನಾಗಿ, ವೇದಾಂತ ಸಿದ್ಧಾಂತ ಯೋಗಮಾರ್ಗಿಗಳಿಗೆ ಹಿರಿದೆಂದು ಹೇಳಿಕೊಳ್ಳ. ಗುರುಲಿಂಗಜಂಗಮದ ಭೃತ್ಯನಾಗಿ ಷಟ್ಸಮಯಾಚಾರಮತವರಿಯ. ಷಟ್‍ಸ್ಥಲಜ್ಞಾನಾನುಭವಿಯಾಗಿ, ಪರಧನ ಪರಸ್ತ್ರೀ ಪರಭೂಮಿಗಿಚ್ಫೈಸುವನಲ್ಲ. ಸರ್ವಾಚಾರಸಂಪತ್ತಿನೊಳಗಿರ್ದವನಾಗಿ ಅನ್ಯಭವಿನುಡಿಗಡಣಕ್ಕಿಂಬುಗೊಟ್ಟವನಲ್ಲ ಗುರುನಿರಂಜನ ಚನ್ನಬಸವಲಿಂಗ ನಾಮಸುಖಿ ತಾನಾಗಿ.