Index   ವಚನ - 230    Search  
 
ಮಾಡಿದಣಿಯದೆ ಮುಂದುವರಿವ ಮಹಿಮನ ನೋಡಾ! ನೋಡಿದಣಿಯದೆ ಕೂಡಿಯಗಲದ ಬೇಡಬಾರದ ಧೀರ ನೋಡಾ! ನೀಡಿ ನಿಲ್ಲದ ಬೇಡಿದೋರದ ನೀಡಿಕೊಳ್ಳದ ನಿಲವ ನೋಡಾ! ಗುರುನಿರಂಜನ ಚನ್ನಬಸವಲಿಂಗನ ಶರಣರಲ್ಲದೆ ಹಾಡಿಹಡೆದ ಬೆಡಗು ನೋಡಾ!