Index   ವಚನ - 231    Search  
 
ತೆರಹಿಲ್ಲದ ಕುರುಹಿಲ್ಲದ ಸರಿಯಿಲ್ಲದ ಪರಮನ ಪಡೆದವರೊಲವ ನೋಡಾ! ಮರಹಿಲ್ಲದ ಕರಕಮಲದಲ್ಲಿ ತಾ ಹೆರೆಹಿಂಗದೆ ಬಗೆಬಗೆಯೊಳು ನೆರೆವ ಸಿರಿಯ ನೋಡಾ! ಗುರುನಿರಂಜನ ಚನ್ನಬಸವಲಿಂಗನ ಶರಣರ ಮಚ್ಚಿನ ಇರವ ನೋಡಾ.