Index   ವಚನ - 233    Search  
 
ಅಷ್ಟಮದಸೂತಕದ ಕೆಟ್ಟಗುಣವಳಿದುಳಿದು, ಇಷ್ಟಲಿಂಗದಲ್ಲಿ ನಿಷ್ಠೆ ನಿಬ್ಬೆರಸಿದ ವೀರಮಾಹೇಶ್ವರನ ಘನಮಹಿಮೆಯನಾರು ಬಲ್ಲರು ಹೇಳಾ! ಪರಮನಾಣತಿವಿಡಿದು, ಪೊಡವಿಯೊಳು ಬಂದು, ನಡೆಗೆಟ್ಟ ಜಡರುಗಳ ಕಡೆದಾರಿಯನು ತೋರಿ ಹಿಡಿದು ನಡೆಸಿದ ಕಡುಗಲಿಯನಾರು ಬಲ್ಲರು ಹೇಳಾ! ಗಮನಾಗಮನವಾದಿಗಳನಮಿತಕ್ಕಗಣಿತ ಗಮನಾಗಮನ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತದಿರವನಾರುಬಲ್ಲರು ಹೇಳಾ!