ಶ್ರೇಷ್ಠ ಶಿವಭಕ್ತರೆಂದು ಇಷ್ಟಲಿಂಗವ ಕೆಳಗೆ ಮಾಡಿ,
ಸೃಷ್ಟಿಯೊಳಿಟ್ಟ ಸ್ಥಾವರಕ್ಕೆರಗಿ,
ಮುಟ್ಟಿಹಾರುವ, ಜೈನ, ರಾಜ, ಮಂತ್ರಿ, ಹಿರಿಯರುಗಳೆಂದು
ಪೆಟ್ಟುಪೆಟ್ಟಿಗೆ ಶರಣೆಂದು ಹೊಟ್ಟೆಯ ಹೊರೆದು
ನರಕಸಮುದ್ರದೊಳ್ಮುಳುಗಾಡುವ
ದುರ್ಭವಿಗಳಿಗೆತ್ತಣ ಲಿಂಗಭಕ್ತಿಯಯ್ಯಾ
ಗುರುನಿರಂಜನ ಚನ್ನಬಸವಲಿಂಗಾ?
Art
Manuscript
Music
Courtesy:
Transliteration
Śrēṣṭha śivabhaktarendu iṣṭaliṅgava keḷage māḍi,
sr̥ṣṭiyoḷiṭṭa sthāvarakkeragi,
muṭṭihāruva, jaina, rāja, mantri, hiriyarugaḷendu
peṭṭupeṭṭige śaraṇendu hoṭṭeya horedu
narakasamudradoḷmuḷugāḍuva
durbhavigaḷigettaṇa liṅgabhaktiyayyā
guruniran̄jana cannabasavaliṅgā?
ಸ್ಥಲ -
ಮಾಹೇಶ್ವರನ ಭಕ್ತಸ್ಥಲ