ಡಂಭಕರೊಂದು ಲಿಂಗವ ಕೊಂಡು
ಮಂಡಲದೊಳಗಾಡುವರಯ್ಯಾ.
ಒಡೆಯನ ಪೂಜೆಯ ಮಾಡುವರಯ್ಯಾ.
ಹೊತ್ತಾರೆದ್ದು ಕ್ಷೇತ್ರ ಮನೆಕೆಲಸವ ಮುಂದಿಟ್ಟು,
ಒಂದೊಂದು ಕುರುಹ ಮುಂದಿಟ್ಟು ಸಂಧಿಸಿ ಮಾಡಿಕೊಂಬ
ಬಂಧಮೋಹಿಗಳ ಪೂಜೆ ಎಂದೆಂದು ನಿಮ್ಮ ಕಾಣಲರಿಯದು.
ಮತ್ತೆಂತೆಂದೊಡೆ, ಹಿಂದುಮುಂದಿನ ಸಂದೇಹವಳಿದು
ಆನಂದಮುಖನಾಗಿ, ಆಯಾಯ
ಕಾಲಕ್ಕೆ ಪೂಜಾರ್ಪಣವ ಪರಿಣಾಮಿಸಿ
ನಿರಂತರಸಾವಧಾನಿಯಾದರೆ ಆತ ನಿಜವೆಂಬೆ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Ḍambhakarondu liṅgava koṇḍu
maṇḍaladoḷagāḍuvarayyā.
Oḍeyana pūjeya māḍuvarayyā.
Hottāreddu kṣētra manekelasava mundiṭṭu,
ondondu kuruha mundiṭṭu sandhisi māḍikomba
bandhamōhigaḷa pūje endendu nim'ma kāṇalariyadu.
Mattentendoḍe, hindumundina sandēhavaḷidu
ānandamukhanāgi, āyāya
kālakke pūjārpaṇava pariṇāmisi
nirantarasāvadhāniyādare āta nijavembe
guruniran̄jana cannabasavaliṅgā.
ಸ್ಥಲ -
ಮಾಹೇಶ್ವರನ ಭಕ್ತಸ್ಥಲ